Friday, June 14, 2013

Facts of Life!



Next day was the Soil mech. paper
Not read a word, nor attended the lecture
Waited whole day for the fall of a wicket
Self-assured to read from that moment

Thus ended the day's play
I had resigned to my fate's say
Woke up the next day with a nervous feel
Wondering do I have any nerves of steel?

India set out to bat in the morning
I strolled to the exam hall self-cursing
Then came the innings declaration
Synchronizing with the start of my examination

My head went into a spiral at the sight of the question-paper
Such was the state of the Aussies to read the spin bowler
Had to strategize the passing score in the available hours
While India pushed for victory in the final overs

Thus ended our day of fables
India beat the Aussies who were invincible
Cleared the Soil mech. paper which was unbelievable
Thanks to Laxman & Dravid in making me believe in miracles

Saturday, June 1, 2013

ಗಾಂಧಿ ಬಜಾರ್ ನಲ್ಲಿ ಭಾನುವಾರದ ಸಂಜೆ




ಗಾಂಧಿ ಬಜಾರ್ ನಲ್ಲಿ ಭಾನುವಾರದ ಸಂಜೆ 
ನಟರಾಜ ಸರ್ವಿಸ್ ನಲ್ಲಿದ್ದೆವು ಕೊಟ್ಟು ಬೈಕಿಗೆ ರಜೆ 
ಅಷ್ಟರಲ್ಲಿ ಕೇಳಿತು ಸಣ್ಣ ಕೂಗು... "ಬಿಸಿ ಮಸಾಲೆ ಬನ್ನಿ ಸರ್"
ತಿರುಗಿ ನೋಡಿದರೆ, ಅದು ವಿದ್ಯಾರ್ಥಿ ಭವನ್ ವೈಟರ್! 

ನಮಿಬ್ಬರಿಗೂ ಕಾದಿತ್ತು ಆಶ್ಚರ್ಯ 
ವಿದ್ಯಾರ್ಥಿ ಭವನ್ ನಲ್ಲಿ ಏನಿರಬಹುದು ಸಮಾಚಾರ!
ಸಾಲಿನಲ್ಲಿ ನಿಂತು ಕಾಯಬೇಕಿತ್ತು ತಿನ್ನಲು ಮಸಾಲ ದೋಸೆ 
ಈಗ ಸದಿಲ್ಲದೆ ಸಿಗುತಿದೆ ಆಮಂತ್ರಣ, ಆಹಾ... ಎಂತಹ ಸೊಗಸೆ! 

ನಾವು ಕಾಣುತಿರುವುದು ಕನಸೋ!
ನಮ್ಮೊಡನೆ ನಡೆಯುತಿರುವುದು ನನಸೋ!
ಯೋಚಿಸುತ್ತಾ ಒಳಗೆ ಹೋದೆವು ನಾವು
ರೆಡಿಯಾಗಿ ಕಾಯಿತಿತ್ತು ಖಾಲಿ ಟೇಬಲ್ ಮತ್ತು ಫಾನು

"ಮಸಾಲೆ ದೋಸೆ ತರೋಣವೆ" ಎಂದನು ವೈಟರು
ಎರಡು ಪ್ಲೇಟ್ ಕೊಡಿ, ಎಂದೆ ನಾ... ಜೊತೆಗೆ ಸ್ವಲ್ಪ ವಾಟರು
ಕಡೆಗೂ ಬಂದಿತು ನಮ್ಮ ಟೇಬಲ್ ಗೆ ಬಿಸಿ ಘಮ ದೋಸೆ
ದೋಸೆ ತಿನ್ನುವಂತೆಯೇ, ತೀರಿತು ಖಾಲೀ ವಿದ್ಯಾರ್ಥಿ ಭವನ ಕಾಣುವ ನಮ್ಮ ಆಸೆ

ದೋಸೆ - ಚಟ್ನಿಗೆ ಸಾತ್ ನೀಡಿತು ಕಾಫಿ ಬಿಸಿ ಬಿಸಿ
ವಹ್ ವಾಹ್... ಜೋಡಿ ಎಂದರೆ ಹೀಗಿರಬೇಕು ಯು ಸೀ!
ಬಿಲ್ ಪಾವತಿಸಿ ಹೊರಗೆ ಬಂದೆವು ವಿಜೃಂಭಿಸಿ
ಅಲ್ಲಿಗೆ ಮುಗಿಯಿತು ನಮ್ಮ ಅಚಾನಕ್ ಅದೃಷ್ಟದ ಎಕ್ಸ್ಟಸಿ !

ಅಡಿಗರೇ, ಮತ್ತೆ ಬನ್ನಿ ನನ್ನ ಕನಸಿನಲ್ಲಿ




ರಸ್ತೆಯಲ್ಲಿ ವಾಕ್ ಮಾಡುತಿದ್ದ ಅಡಿಗರನ್ನು ಹಿಂಬಾಲಿಸಿ ಹೊರಟೆ ನಾನು 
"ಸರ್... ಸರ್..." ಕೂಗಿತು ನನ್ನ ಕಂಠ, ಆದರೆ, ಹೊರಟೇ ಬಿಟ್ಟರಲ್ಲ ದಾರಿಗುಂಟ! 
ಕಡೆಗೂ ಸಿಗಲ್ಲಿಲ್ಲ ನನ್ನ ಪ್ರಶ್ನೆಗೆ ಉತ್ತರ...
ಅಡಿಗರು ಆ ಪದ್ಯವ ಬರೆಯುವುದಕ್ಕೆ ಯಾವುದು ಆಕರ?

ಅಷ್ಟರಲ್ಲಿ ಹೊಡೆಯಿತು ಗಡಿಯಾರದ ಅಲಾರಮ್ಮು... 
ಎಚ್ಚರವಾದಮೇಲೆ ತಿಳಿಯಿತು, ನಾನು ಕಂಡದ್ದು ಅದ್ಭುತ ಡ್ರೀಮು!!!

ಅಡಿಗರೇ, ಮತ್ತೆ ಬನ್ನಿ ನನ್ನ ಕನಸಿನಲ್ಲಿ 
ಈ ಬಾರಿ ನನ್ನ ಕೂಗು ಕೇಳಿದರೆ, ಕೊಂಚ ನಿಲ್ಲಿ 
ನಿಮ್ಮ ಹತ್ತಿರ ಕೇಳಬೇಕಾದ ಪ್ರಶ್ನೆಗಳಿವೆ ಬಹಳಷ್ಟು 
ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುವೆ ನಾ ಮತ್ತಷ್ಟು!