Saturday, June 1, 2013

ಗಾಂಧಿ ಬಜಾರ್ ನಲ್ಲಿ ಭಾನುವಾರದ ಸಂಜೆ




ಗಾಂಧಿ ಬಜಾರ್ ನಲ್ಲಿ ಭಾನುವಾರದ ಸಂಜೆ 
ನಟರಾಜ ಸರ್ವಿಸ್ ನಲ್ಲಿದ್ದೆವು ಕೊಟ್ಟು ಬೈಕಿಗೆ ರಜೆ 
ಅಷ್ಟರಲ್ಲಿ ಕೇಳಿತು ಸಣ್ಣ ಕೂಗು... "ಬಿಸಿ ಮಸಾಲೆ ಬನ್ನಿ ಸರ್"
ತಿರುಗಿ ನೋಡಿದರೆ, ಅದು ವಿದ್ಯಾರ್ಥಿ ಭವನ್ ವೈಟರ್! 

ನಮಿಬ್ಬರಿಗೂ ಕಾದಿತ್ತು ಆಶ್ಚರ್ಯ 
ವಿದ್ಯಾರ್ಥಿ ಭವನ್ ನಲ್ಲಿ ಏನಿರಬಹುದು ಸಮಾಚಾರ!
ಸಾಲಿನಲ್ಲಿ ನಿಂತು ಕಾಯಬೇಕಿತ್ತು ತಿನ್ನಲು ಮಸಾಲ ದೋಸೆ 
ಈಗ ಸದಿಲ್ಲದೆ ಸಿಗುತಿದೆ ಆಮಂತ್ರಣ, ಆಹಾ... ಎಂತಹ ಸೊಗಸೆ! 

ನಾವು ಕಾಣುತಿರುವುದು ಕನಸೋ!
ನಮ್ಮೊಡನೆ ನಡೆಯುತಿರುವುದು ನನಸೋ!
ಯೋಚಿಸುತ್ತಾ ಒಳಗೆ ಹೋದೆವು ನಾವು
ರೆಡಿಯಾಗಿ ಕಾಯಿತಿತ್ತು ಖಾಲಿ ಟೇಬಲ್ ಮತ್ತು ಫಾನು

"ಮಸಾಲೆ ದೋಸೆ ತರೋಣವೆ" ಎಂದನು ವೈಟರು
ಎರಡು ಪ್ಲೇಟ್ ಕೊಡಿ, ಎಂದೆ ನಾ... ಜೊತೆಗೆ ಸ್ವಲ್ಪ ವಾಟರು
ಕಡೆಗೂ ಬಂದಿತು ನಮ್ಮ ಟೇಬಲ್ ಗೆ ಬಿಸಿ ಘಮ ದೋಸೆ
ದೋಸೆ ತಿನ್ನುವಂತೆಯೇ, ತೀರಿತು ಖಾಲೀ ವಿದ್ಯಾರ್ಥಿ ಭವನ ಕಾಣುವ ನಮ್ಮ ಆಸೆ

ದೋಸೆ - ಚಟ್ನಿಗೆ ಸಾತ್ ನೀಡಿತು ಕಾಫಿ ಬಿಸಿ ಬಿಸಿ
ವಹ್ ವಾಹ್... ಜೋಡಿ ಎಂದರೆ ಹೀಗಿರಬೇಕು ಯು ಸೀ!
ಬಿಲ್ ಪಾವತಿಸಿ ಹೊರಗೆ ಬಂದೆವು ವಿಜೃಂಭಿಸಿ
ಅಲ್ಲಿಗೆ ಮುಗಿಯಿತು ನಮ್ಮ ಅಚಾನಕ್ ಅದೃಷ್ಟದ ಎಕ್ಸ್ಟಸಿ !

No comments:

Post a Comment